Thursday, 29 September 2011

RAMA BUS


ವಿಜಯಲಕ್ಷ್ಮೀ ಬಂತು, ಗುರುರಾಘವೇಂದ್ರ ಹೋಯ್ತು, ಉದಯ ಬರ್ಲಿಕ್ಕೆ ಸ್ವಲ್ಪ ಲೇಟಾಗುತ್ತೆ ರಾಮ ಇವತ್ತು ಬೇಗ ಬಂತು.... ಇದು ಯಾವುದರ ಬಗ್ಗೆ ಹೇಳೋದು ಗೊತ್ತಾ ? ಬಸ್ಗಳ ಬಗ್ಗೆ....ನಮ್ಮೂರು ಕಡೆ ಬಸ್ಗಳನ್ನ ಒಂದು ಯಂತ್ರ ಅಂತ ಯಾರೂ ನೋಡೋಲ್ಲ. ಅದ್ರಲ್ಲೂ ಪ್ರೈವೆಟ್ ಬಸ್ಗಳಂದ್ರೆ ಸ್ವಲ್ಪ ಪ್ರೀತಿ ಜಾಸ್ತಿ. ಹಾಗಾಗಿ ಬಸ್ಗಳ ಹೆಸ್ರು ಹೇಳೋವಾಗ ಯಾರೂ ಹೆಸರಿನ ಮುಂದೆ, ಮತ್ತೆ ಬಸ್ ಅಂತ ಸೇರಿಸೋ ಕಷ್ಟ ತಗೊಳ್ಳೋಲ್ಲ! ನನ್ಗೆ ಸಣ್ಣವನಿದ್ದಾಗಲೇ ಈ ರಾಮ ಬಸ್ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಅದ್ರಲ್ಲೂ ತಲಕಾವೇರಿ ರಾಮ ಅಂದ್ರೆ ಏನೋ ಒಂಥರ ಪ್ರೀತಿ ! ಭಾಗಮಂಡಲ ಮತ್ತೆ ಮಡಿಕೇರಿ ಮಧ್ಯೆ ಇರೋ ದೂರ 38 ಕಿಲೋಮೀಟರ್. ಇಷ್ಟು ಅಂತರ ಕ್ರಮಿಸೋದಿಕ್ಕೆ ರಾಮಬಸ್ ಹತ್ತಿರ ಹತ್ತಿರ ಎರಡೂವರೆ ಗಂಟೆ ತಕ್ಕೊಳ್ತಿತ್ತು. ಡ್ರೈವರ್ ರಾಘವಯ್ಯಣ್ಣ, ಬಸ್ಗೆ ನೋವಾಗುತ್ತೋ, ರೋಡ್ಗೆ ಪೆಟ್ಟಾಗುತ್ತೋ ಅಥ್ವಾ ತಮ್ಮ ಸೊಂಟ ಉಳುಕಿ ಎಲ್ಲಿ ರಾತ್ರಿ ಹೆಂಡತಿ ಕೈಯಲ್ಲಿ ಬೈಸಿಕೊಳ್ಳಬೇಕಾಗುತ್ತೋ ಅನ್ನೋ ಹಾಗೆ ನಿಧಾನಕ್ಕೆ ಓಡಿಸ್ತಿದ್ದ್ರು. ಭಾಗಮಂಡಲದಲ್ಲಿ ಹತ್ತಿ ಕೂತವ್ರಿಗೆ ಮಡಿಕೇರಿ ಟೋಲ್ಗೇಟ್ ತಲುಪೋ ತನಕ ಒಳ್ಳೇ ಒಂದು ನಿದ್ದೆ ಆಗ್ತಿತ್ತು. ಈಗ ಭಾಗಮಂಡಲದಲ್ಲಿ ಪ್ರತೀ ವರ್ಷ ಮೆರಥಾನ್ ನಡೆಯುತ್ತೆ. ಇದ್ರಲ್ಲಿ ಫಸ್ಟ್ ಬರೋರು ಮಡಿಕೇರಿಯಿಂದ ಭಾಗಮಂಡಲಕ್ಕೆ ಬರೀ ಒಂದೂವರೆ ಗಂಟೇಲಿ ಓಡ್ತಾರೆ. ಅಂದ್ರೆ ಆ ರಾಮ ಬಸ್ಗಿಂತ ಈ ಓಡೋ ಜನರೇ ಫಾಸ್ಟ್ ಅಂದ ಹಾಗೆ ಆಯ್ತು. ಅಂದ ಹಾಗೆ ಈ ತಲಕಾವೇರಿ ರಾಮ ಇದ್ಯಲ್ಲ, ಇದು ತಲಕಾವೇರಿ ದೇವಾಸ್ಥಾನಕ್ಕೆ ಸೇರಿದ ಬಸ್ ರಾಮ ಮೋಟಾರ್ರ್ಸನವ್ರು ಇದನ್ನ ದೇವಾಸ್ಥಾನಕ್ಕೆ ಕೊಟ್ಟಿದ್ದಾರೆ. ಆದ್ರೆ ಮೈಂಟೇನೆನ್ಸ್ ಎಲ್ಲಾ ಅವ್ರೇ ನೋಡಿಕೊಳ್ಳೋದ್ರಿಂದ ದೇವಸ್ಥಾನಕ್ಕೆ ವರ್ಷಕ್ಕೆ ಇಷ್ಟು ಅಂತ ಕೊಡ್ತಾರೆ. ಹೋದ ತಿಂಗ್ಳು ನಾನು ಭಾಗಮಂಡಲಕ್ಕೆ ಹೋಗಿದ್ದೆ. ಆ ತಲಕಾವೇರಿ ರಾಮ ಎಲ್ಲಾದ್ರೂ ಕಾಣುತ್ತಾ ಅಂತ ಹುಡುಕ್ತಿದ್ದಾಗ, ಭಾಗಮಂಡಲ ದೇವಸ್ಥಾನ ಎದುರೇ ನಿಂತಿತ್ತು. ಕ್ಲೀನರ್ `ತಲಕಾವೇರಿ' `ತಲಕಾವೇರಿ' ಅಂತ ಕರೀತ್ತಿದ್ದ.... ಬಸ್ ಬಣ್ಣನೂ ಈಗ ಚೇಂಜ್ ಆಗಿತ್ತು. ಬಹುಶಃ ಅದ್ರ ಡ್ರೈವರ್, ಸ್ಪೀಡ್ ಕೂಡ ಬದ್ಲಾಗಿರ್ಬಹುದೇನೋ....

Tuesday, 27 September 2011

PARBU


ದುಗರ್ಾಭವನ ಹೊಟೇಲಿನ ಒಂದು ಕತ್ತಲ ಕೋಣೆ. ಹೊಟೇಲಿನಲ್ಲಿ ಸೇಲಾಗೋ ಎಲ್ಲಾ ಥರದ ದೋಸೆ, ಇಡ್ಲಿಗೆ ಬೇಕಾದ ಹಿಟ್ಟು ರೆಡಿಯಾಗೋದು ಅಲ್ಲೇ...ಹಾಗಂತ ರೂಂನಲ್ಲೇನೂ ಗ್ರೈಂಡರ್ ಇಟ್ಟಿಲ್ಲ. ವರ್ಷದಲ್ಲಿ 6 ತಿಂಗಳಿಗೂ ಜಾಸ್ತಿ ಆಕಾಶ ತೂತಾದ ಹಾಗೆ ಸುರಿಯೋ ಮಳೆ..ಮೂರು ತಿಂಗಳು ಮಾತ್ರ ದಿನ ಪೂತರ್ಿ ಕರೆಂಟ್ ಇರೋ ಭಾಗಮಂಡಲದಂಥ ಊರಲ್ಲಿ ಗ್ರೈಂಡರ್ ತಂದಿಡೋ ಧೈರ್ಯ ಯಾರೂ ಮಡೋಲ್ಲ ಬಿಡಿ. ಹಾಗಾದ್ರೆ ಕತ್ತಲ ರೂಂನಲ್ಲಿ ಹಿಟ್ಟು ರೆಡಿ ಆಗೋದು ಹೇಗೆ? ಅಲ್ಲೋಬ್ಬ ಮಾನವ ರೂಪದ ಮೆಷಿನ್ ಇದ್ದ. ಆವ್ನೇ ಪಬರ್ು. ಹೊಟೇಲಿಗೆ ಬರೋ ಗಿರಾಕಿಗಳು ಯಾರೂ ಪಬರ್ುನ ನೋಡಿರೋದಿಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ಅವ್ನು ಹಾಗೆಲ್ಲಾ ಹೊರಗೆ ಬರೋನೇ ಅಲ್ಲ. 15 ದಿನಕ್ಕೊಮ್ಮೆಯೋ ತಿಂಗಳಿಗೆ ಒಂದು ಸಲವೋ ಹೊರಗೆ ಕಾಣಿಸಿಕೊಳ್ತಿದ್ದ. ಆವತ್ತು ಅವನ ರಜೆಯ ದಿನ ಆಗಿರ್ತಿತ್ತು. ಅದೂ ಓನರ್ ಕೊಟ್ರೆ ಮಾತ್ರ ರಜೆ ತೆಗೆದುಕೊಳ್ತಿದ್ದ. ನೀಟಾಗಿ ಹೇರ್ಕಟ್, ಶೇವ್, ಸ್ನಾನ ಮಾಡ್ಕೊಂಡು ಹೊರಗೆ ಬರ್ತಿದ್ದ. ಹಿಂದಿನ ಬಾಗಿಲೇ ಅವ್ನಿಗೆ ಹೆಬ್ಬಾಗಿಲು. ಅಲ್ಲಿಂದ ಅವ್ನು ಸೀದಾ ಹೋಗ್ತಿದ್ದದ್ದು ನಾಪೋಕ್ಲು ರೋಡ್ನಲ್ಲಿದ್ದ ಸುಂದರನ ಸಾರಾಯಿ ಅಂಗಡಿಗೆ. ಅಲ್ಲಿ ಅವ್ನಿಗೆ ಬೇಕಾಗಿದ್ದು ಸಿಗ್ಲಿಲ್ಲ ಅಂದ್ರೆ ಈಕಡೆ ಲಕ್ಕಿ ಸ್ಟೋರ್ ಹತ್ರ ಇದ್ದ ಹರ್ಷನ ಸಾರಾಯಿ ಅಂಗಡಿ ಕಡೆ ಹೆಜ್ಜೆ ಹಾಕ್ತಿದ್ದ... ಅಷ್ಟೂ ದಿನದ ಬಾಕಿ ಎಲ್ಲಾ ತೀರಿಸೋ ಹಾಗೆ ಕುತ್ತಿಗೆ ತನಕ ಕುಡೀತ್ತಿದ್ದ. ಆಮೇಲೆ ಪಬರ್ುನ ನೋಡ್ಬೇಕು... ದುಗರ್ಾಭವನ ಹೊಟೇಲಿನ ಕತ್ತಲ ಕೋಣೇಲಿ ಕೂತು ಹಿಟ್ಟು ರುಬ್ಬೋ ಮೌನಮೂತರ್ಿ ಪಬರ್ು ಇವ್ನೇನಾ ಅನ್ನೋ ಹಾಗೆ ವತರ್ಿಸ್ತಿದ್ದ. ಇಂಗ್ಲೆಂಡ್ನ ಮಹಾರಾಣಿ ವಿಕ್ಟೋರಿಯಾ, ಜರ್ಮನಿಯ ಹಿಟ್ಲರ್, ನಮ್ಮ ಜವಾಹರಲಾಲ್ ನೆಹರು ಅದೇ ಭಾಗಮಂಡಲದ ಮರಿ ರೌಡಿ ಉಂಞ್ಞ ಎಲ್ಲರಿಗೂ ಸಿಕ್ಕಾಪಟ್ಟೆ ಮಂಗಳಾರತಿ ಮಾಡಿಬಿಡ್ತಿದ್ದ. ಅದ್ರಲ್ಲೂ ಮುಸ್ಲಿಮರು ಅಂದ್ರೆ ಸಾಕು ಪಬರ್ುಗೆ ಅದೆಂಥದ್ದೋ ಸಿಟ್ಟು. ಬಹುಷಃ ಮೊದ್ಲು ಅವ್ನು ಜಾಫರ್ ಹೊಟೇಲ್ನಲ್ಲಿ ಕೆಲ್ಸ ಮಾಡ್ತಿದ್ದಾಗ ಸರಿಯಾಗಿ ನೋಡಿಕೊಂಡಿರ್ಲಿಲ್ಲವೇನೋ.... ಎಲ್ಲರಿಗೂ ಬೈದು ಸುಸ್ತಾದ ಮೇಲೆ 10 ಕಟ್ಟು ಸಾಧು ಬೀಡಿ ತಕ್ಕೊಂಡು ಮತ್ತೆ ಅದೇ ತನ್ನ ಕತ್ತಲು ಕೋಣೆ ಸೇರಿಬಿಡ್ತಿದ್ದ ಪಬರ್ು. ಇವ್ನು ಬಿ ಸಿ ರೋಡ್ ಹತ್ರದ ಯಾವುದೋ ಊರಿನವನಂತೆ. ಭಾಗಮಂಡಲಕ್ಕೆ ಯಾವಾಗ ಬಂದ್ನೋ ಯಾರಿಗೂ ಗೊತ್ತಿಲ್ಲ. ಕೇಳಿದ್ರೆ, ನಾನು ಇದೂವರೆಗೂ ಬಸ್ನಲ್ಲೇ ಕೂತಿಲ್ಲ ಅಂತ ತುಳುವಿನಲ್ಲಿ ಹೇಳ್ತಿದ್ದ. ಇಂಥ ಪಬರ್ುಗೆ ಒಮ್ಮಿಂದೊಮ್ಮೆಲೇ ಹುಟ್ಟೂರು ನೆನಪಾಯ್ತು. ಯಾವತ್ತೂ ಬಸ್ ಹತ್ತದ ಪಬರ್ು ಆವತ್ತು ಭಾಗಮಂಡಲದಿಂದ ಮಂಗಳೂರಿಗೆ ಹೋಗೋ ಬಸ್ ಹತ್ತಿದ್ದ...ಯಾಕೋ ಅವ್ನ ಕಣ್ಣಿನಲ್ಲಿ ತೆಳುವಾಗಿ ನೀರಿನ ಪರದೆ ಕಾಣಿಸಿಕೊಂಡಿತ್ತು...ಅನ್ನ ಕೊಟ್ಟ ಊರನ್ನ ಬಿಟ್ಟು ಹೋಗ್ತಿದ್ದೀನಿ ಅನ್ನೋ ಕಾರಣಕ್ಕೋ ಅಥವಾ ಜನ್ಮ ನೀಡಿದ ನಾಡಿಗೆ ಮರಳುತ್ತಿದ್ದೇನೆ ಅಂತಲೋ... ಕೇಳೋಣ ಅಂದ್ರೆ ಪಬರ್ು ಈಗ ಎಲ್ಲಿ ಇದ್ದಾನೆ ಅನ್ನೋದು ಯಾರಿಗೂ ಗೊತ್ತಿಲ್ಲ.....